ಈ ಯೋಜನೆಯು ಆರಂಭಿಕರು ತಮ್ಮ ಮೊದಲ ಕೊಡುಗೆಯನ್ನು ನೀಡುವ ವಿಧಾನವನ್ನು ಸರಳಗೊಳಿಸುವ ಮತ್ತು ಮಾರ್ಗದರ್ಶನ ಮಾಡುವ ಗುರಿಯನ್ನು ಹೊಂದಿದೆ. ನಿಮ್ಮ ಮೊದಲ ಕೊಡುಗೆಯನ್ನು ನೀಡಲು ನೀವು ಬಯಸಿದರೆ, ಕೆಳಗಿನ ಹಂತಗಳನ್ನು ಅನುಸರಿಸಿ.
ನೀವು ಆಜ್ಞಾ ಸಾಲಿನೊಂದಿಗೆ ಆರಾಮದಾಯಕವಲ್ಲದಿದ್ದರೆ,GUI ಉಪಕರಣಗಳನ್ನು ಬಳಸುವ ಟ್ಯುಟೋರಿಯಲ್‌ಗಳು ಇಲ್ಲಿವೆ._
ನಿಮ್ಮ ಯಂತ್ರದಲ್ಲಿ ನೀವು ಗಿಟ್ ಹೊಂದಿಲ್ಲದಿದ್ದರೆ,ಅದನ್ನು ಸ್ಥಾಪಿಸಿ
ಈ ಪುಟದ ಮೇಲ್ಭಾಗದಲ್ಲಿರುವ ಫೋರ್ಕ್ ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ ಈ ರಿಪಾಸಿಟರಿಯನ್ನು ಫೋರ್ಕ್ ಮಾಡಿ. ಇದು ನಿಮ್ಮ ಖಾತೆಯಲ್ಲಿ ಈ ರಿಪಾಸಿಟರಿಯ ನಕಲನ್ನು ರಚಿಸುತ್ತದೆ.
ಈಗ ನಿಮ್ಮ ಯಂತ್ರಕ್ಕೆ ಫೋರ್ಕ್ಡ್ ರಿಪಾಸಿಟರಿಯನ್ನು ಕ್ಲೋನ್ ಮಾಡಿ. ನಿಮ್ಮ ಗಿಟ್-ಹಬ್ ಖಾತೆಗೆ ಹೋಗಿ, ಫೋರ್ಕ್ ಮಾಡಿದ ರಿಪಾಸಿಟರಿಯನ್ನು ತೆರೆಯಿರಿ, "Code" ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಂತರ "copy to clipboard" ಐಕಾನ್ ಅನ್ನು ಕ್ಲಿಕ್ ಮಾಡಿ - ಇದು URL(ವೆಬ್ ವಿಳಾಸ) ಅನ್ನು ನಕಲಿಸುತ್ತದೆ[ಕಾಪಿ ಮಾಡುತ್ತದೆ].
ಟರ್ಮಿನಲ್ ತೆಗೆದು ಈ ಕೆಳಗಿನ ಗಿಟ್ ಆಜ್ಞೆಯನ್ನು ಚಲಾಯಿಸಿ:
git clone "copied URL"ಇಲ್ಲಿ "copied URL" - ನೀವು ಈಗಷ್ಟೇ ನಕಲಿಸಿದ URL(ನೀವು ಫೋಕ೯ ಮಾಡಿದ ಪ್ರಾಜೆಕ್ಟ ಲಿಂಕ್) ಅನ್ನು ಉದ್ಧರಣ[""] ಚಿಹ್ನೆಗಳಿಲ್ಲದೆ ಈ ಸ್ಥಳಕ್ಕೆ ಸೇರಿಸಿ.
ಉದಾಹರಣೆಗೆ:
git clone https://github.com/ಇದು ನೀನು/first-contributions.git`ಇದು ನೀನು' ಅಂದ್ರೆ ನಿಮ್ಮ ಗಿಟ್‌ಹಬ್ ಖಾತೆಯ ಹೆಸರು. ಇಲ್ಲಿ ನೀವು ನಿಮ್ಮ ಕಂಪ್ಯೂಟರ್‌ಗೆ ಗಿಟ್‌ಹಬ್‌ನಲ್ಲಿನ first-contributions ಯೋಜನೆಯನ್ನು ನಕಲಿಸುತ್ತಿದ್ದೀರಿ.
ನಿಮ್ಮ ಕಂಪ್ಯೂಟರ್‌ನಲ್ಲಿ first-contributions ರಿಪಾಸಿಟರಿ ಕಡತಕ್ಕೆ ಬದಲಾಯಿಸಿ (ನೀವು ಈಗಾಗಲೇ ಇಲ್ಲದಿದ್ದರೆ):
cd first-contributionsಈಗ git checkout ಆಜ್ಞೆಯನ್ನು ಬಳಸಿಕೊಂಡು ಒಂದು ಶಾಖೆಯನ್ನು ರಚಿಸಿ:
git checkout -b <ನಿಮ್ಮ ಹೊಸ-ಶಾಖೆ-ಹೆಸರನ್ನು ಸೇರಿಸಿ>ಉದಾಹರಣೆಗೆ:
git checkout -b add-alonzo-church(ಶಾಖೆಯ ಹೆಸರಿನಲ್ಲಿ add ಎಂಬ ಪದವನ್ನು ಹೊಂದುವ ಅಗತ್ಯವಿಲ್ಲ, ಆದರೆ ಇದನ್ನು ಸೇರಿಸುವುದು ಸಮಂಜಸವಾದ ವಿಷಯ ಏಕೆಂದರೆ ಈ ಶಾಖೆಯ ಉದ್ದೇಶವು ನಿಮ್ಮ ಹೆಸರನ್ನು ಪಟ್ಟಿಗೆ ಸೇರಿಸುವುದು.)
ಈಗ ಪಠ್ಯ ಸಂಪಾದಕದಲ್ಲಿ Contributor.md ಫೈಲ್ ಅನ್ನು ತೆರೆಯಿರಿ, ಅದಕ್ಕೆ ನಿಮ್ಮ ಹೆಸರನ್ನು ಸೇರಿಸಿ. ಅದನ್ನು ಫೈಲ್‌ನ ಪ್ರಾರಂಭ ಅಥವಾ ಕೊನೆಯಲ್ಲಿ ಸೇರಿಸಬೇಡಿ. ನಡುವೆ ಎಲ್ಲಿಯಾದರೂ ಸೇರಿಸಿ.
ಈಗ, ಫೈಲ್ ಅನ್ನು ಸೇವ್ ಮಾಡಿ.

git status ಆಜ್ಞೆಯನ್ನು ಕಾರ್ಯಗತಗೊಳಿಸಿದರೆ, ನೀವು ಮಾಡಿದ ಬದಲಾವಣೆ ಕಾಣಿಸುತ್ತವೆ.
git add ಆಜ್ಞೆಯನ್ನು ಬಳಸಿ, ಬದಲಾಯಿಸಿದ ಫೈಲ್‌ನ್ನು ಸ್ಟೇಜ ಮಾಡಿ.
git add Contributors.mdಈಗ git commit ಆಜ್ಞೆಯನ್ನು ಬಳಸಿಕೊಂಡು ಆ ಬದಲಾವಣೆಗಳನ್ನು ಕಮಿಟ್ ಮಾಡಿ:
git commit -m "add name to contributors""add name to contributors" ಇದು ಕಮಿಟ್ ಸಂದೇಶ. ನೀವು ಮಾಡಿದ ಬದಲಾವಣೆಗೆ ತಕ್ಕಂತೆ ಸಂದೇಶವು ಅಥ೯ಪೂಣ೯ವಾಗಿರಬೇಕು
Git push ಆಜ್ಞೆಯನ್ನು ಬಳಸಿಕೊಂಡು ನಿಮ್ಮ ಬದಲಾವಣೆಗಳನ್ನು ಗಿಟ್‌ಹಬ್‌ಗೆ ಕಳುಹಿಸಿರಿ:
git push origin <add-your-branch-name><add-your-branch-name> ಈ ಸ್ಥಳದಲ್ಲಿ ನೀವು ರಚಿಸಿದ ಬ್ರ್ಯಾಂಚ್ ಹೆಸರನ್ನು ಬರೆಯಿರಿ.
ನೀವು ಗಿಟ್‌ಹಬ್‌ನಲ್ಲಿರುವ ನಿಮ್ಮ ಕಡತಕ್ಕೆ ಹೋದರೆ, ನೀವು Compare & pull request ಬಟನ್ ನೋಡುತ್ತೀರಿ. ಆ ಬಟನ್ನ್ನು ಕ್ಲಿಕ್ ಮಾಡಿ.

ಶೀಘ್ರದಲ್ಲೇ ನಾನು ನಿಮ್ಮ ಎಲ್ಲಾ ಬದಲಾವಣೆಗಳನ್ನು ಈ ಯೋಜನೆಯ ಮಾಸ್ಟರ್ ಶಾಖೆಯಲ್ಲಿ ವಿಲೀನಗೊಳಿಸುತ್ತೇನೆ. ಬದಲಾವಣೆಗಳನ್ನು ವಿಲೀನಗೊಳಿಸಿದ ನಂತರ ನೀವು ಅಧಿಸೂಚನೆ ಇಮೇಲ್ ಅನ್ನು ಪಡೆಯುತ್ತೀರಿ.
ಅಭಿನಂದನೆಗಳು! ನೀವು ಕೊಡುಗೆದಾರರಾಗಿ ಆಗಾಗ್ಗೆ ಎದುರಾಗುವ ಪ್ರಮಾಣಿತ fork -> clone -> edit -> PR ವರ್ಕ್‌ಫ್ಲೋ ಅನ್ನು ನೀವು ಇದೀಗ ಪೂರ್ಣಗೊಳಿಸಿದ್ದೀರಿ! ನಿಮ್ಮ ಕೊಡುಗೆಯನ್ನು ಸಂಭ್ರಮಿಸಿ ಮತ್ತು ಅದನ್ನು ನಿಮ್ಮ ಸ್ನೇಹಿತರು ಹಾಗು ಅನುಯಾಯಿಗಳೊಂದಿಗೆ ಹಂಚಿಕೊಳ್ಳಿ ವೆಬ್ ಅಪ್ಲಿಕೇಶನ್. ನೀವು ಹೆಚ್ಚಿನ ಅಭ್ಯಾಸವನ್ನು ಬಯಸಿದರೆ, ಪರಿಶೀಲಿಸಿ ಕೋಡ್ ಕೊಡುಗೆಗಳು. ಈಗ ನೀವು ಹೆಚ್ಚಿನ ಯೋಜನೆಗಳಿಗೆ ಕೊಡುಗೆ ನೀಡಲು ಪ್ರಾರಂಭಿಸಬಹುದು. ನಾವು ನಿಮಗಾಗಿ ಒಂದು ಪಟ್ಟಿಯನ್ನು ತಯಾರಿಸಿದ್ದೇವೆ ಅದು ಬಹಳ ಸುಲಭವಾದ ಸಮಸ್ಯೆಗಳು. ಯೋಜನೆಗಳ ಪಟ್ಟಿ
| GitHub Desktop | Visual Studio 2017 | GitKraken | Visual Studio Code | Atlassian Sourcetree | IntelliJ IDEA |



